Posts

KPCRS ನಲ್ಲಿ ನಾವು

ಮುಂಜಾನೆ ೫ ಗಂಟೆಗೇ ಏಳಲಾಗದ  ನಾವು ವಾರ್ಡನ್ ಬಂದರೆ ಎದ್ದು ಓಡುತ್ತಿದ್ದೆವು  ನಾವು ಮುಂಜಾನೆ ಚಹದಾಸೆಗೆ ಏಳುತ್ತಿದರು  ಕೆಲವರು ನಿದ್ದೆ ಸಾಕಾಗದೆ ಕಣ್ಣುತ್ತಿಕ್ಕುತ್ತಿದ್ದರು  ಕೆಲವರು. ಯೋಗಾಸನ ಕ್ಲಾಸಿಗೆ ಹೋಗುತ್ತಿದ್ದೆವು  ನಾವು ಶವಾಸನ,ಮಕರಾಸನಕ್ಕೆ ಕಾಯುತ್ತಿದ್ದೆವು  ನಾವು ಬಾತ್ರೂಮಿಗೆ ಸಾಲು ಸಾಲಾಗಿ ನಿಲ್ಲುತ್ತಿದ್ದೆವು ನಾವು ತಿಂಡಿತಿಂದು ಸಾಲಾಗಿ ಶಾಲೆಗೆ ಹೋಗುತ್ತಿದ್ದೆವು ನಾವು. ಆಟಕ್ಕೆ ಫುಟ್ಬಾಲ್ ಕೊಡದಾಗ ಅತ್ತಿದ್ದೆವು ನಾವು ಆಡುತ್ತಾ  ಗೆಳೆಯನ ಕೈ ಮುರಿದಿದ್ದೇವು ನಾವು ಸಂಜೆ ಓದುವಾಗ ನಿದ್ದೆಮಾಡುತ್ತಿದ್ದೆವು ನಾವು ಮಾವಿನಕಾಯಿ ಕಡಿಯಲು ಹೋಗಿ ಒದೆತಿಂದ್ದಿದ್ದೆವು ನಾವು. ಸಂಜೆ ಚಹಾತರಲು ಯಾರು ಮುಂದಾಗದ ನಾವು ಒಂದು ಒಂದು ಬಿಸ್ಕತ್ತು ಲೆಕ್ಕಾಕೇಳಿ ತಿಂದಿದ್ದೆವು ನಾವು ಒಂದು ಪೂರಿಗೆ ಒಂದು ಇಡ್ಲಿ  ಕೊಡುತ್ತಿದ್ದೆವು ನಾವು ಪ್ರಾರ್ಥನೆ ಮಾಡುತಲ್ಲೇ ಊಟ ಮಾಡುತ್ತಿದ್ದೆವು ನಾವು. ಶಿಕ್ಷಕರು ಹಾಜರಿ ತಗ್ಗೊಳೋವಾಗ ಎದ್ದು ನಿಲ್ಲುತ್ತಿದ್ದೆವು ನಾವು ಶಿಕ್ಷಕರು ಮಲಗಿದಾಗ ಚಾಕಲೇಟ್ ಕದ್ದು  ತಿನ್ನುತ್ತಿದ್ದೆವು ನಾವು ಬಾಗಿಲು ಇಣುಕಿ ಶಿಕ್ಷಕರ ಬರುವಿಕೆಗೆ ಕಾದೆವು ನಾವು ಕ್ಲಾಸ್ಸಿಗೆ ಯಾರು ಬರದಾಗ ಕಿರ.. ಆಡುತ್ತಿದ್ದೆವು ನಾವು. ...

ರೈತ

ನೀನಾದೆ ಅನ್ನಧಾತ ನಮಗಿಲ್ಲಿ ನಿನ್ನ ಕೈ ಕೆಸರಾದರೆ ನಮ್ಮ ಬಾಯಿ ಮೊಸರಿಲ್ಲಿ ಭೂ ತಾಯಿಯನ್ನು ನಂಬಿ ಬಿತ್ತುವೆ ನೀನಲ್ಲಿ  ಜಗವೆಲ್ಲ ನಿನ್ನ ನಂಬಿ ಹಸಿದು ಕುಂತಿರುವುದು ಇಲ್ಲಿ  ಜನರೆಲ್ಲಾ ಲಕ್ಷ್ಮಿ ಸೇವಕರು ಜಗದಲ್ಲಿ  ನೀನೊಬ್ಬ ಭೂ ತಾಯಿ ಸೇವಕ ಅದರಲ್ಲಿ  ಕೊಟ್ಟ ಹಣಕೆ ತಿಂದು ಚೆಲ್ಲಿದರು ಜನರಿಲ್ಲಿ  ನೀ ಪಟ್ಟ ಕಷ್ಟ ನೆನೆಯುವರಾರು ಇಲ್ಲಿ  ಉಳುವ ನೇಗಿಲ ಯೋಗಿಯು ನೀನಲ್ಲಿ ನಿನ್ನ ಜೀವನ ಭೂ ತಾಯಿ ಮಡಿಲ್ಲಲಿ  ನಮ್ಮ ತುತ್ತು ಅನ್ನದ ಒಡೆಯನು ನೀನಿಲ್ಲಿ  ಜಗವನು ಸಾಕುವ ಸಾಹುಕಾರ ನೀನಿಲ್ಲಿ  ನೀ ಬೆಳೆದ ಬೇಳೆಗೆ ಸರಿಯಾದ ಬೆಲೆ ಇಲ್ಲಾ ಇಲ್ಲಿ  ನೀ ಮಾಡಿದ್ದಾ ಸಾಲಕೆ ಬಡ್ಡಿ ಉಂಟು ಇಲ್ಲಿ  ಸಾಲದ ಬಾದೆಗೆ ನೊಂದು ಕುಗ್ಗಿದೆ ನೀನಿಲ್ಲಿ  ಸಾವಿನ ಬಾಗಿಲು ತಟ್ಟಿದೆ ನೀ ಮನದಲ್ಲಿ . 

ರಾಜಕಾರಣಿ

ನಾನಾದರೆ  ರಾಜಕಾರಣಿ ಮಲಗುವೆ  ಸಭೆ  ಸಂತೆಯಲ್ಲಿ ಎದ್ದೇಳುವೆ ಚುನಾವಣೆ ಹೊತ್ತಲ್ಲಿ ಹಣ, ಹೆಂಡ ಹಂಚುವೆ ಜನರಲ್ಲಿ ನಾಗೆದ್ದರೆ ಚುನಾವಣೆಯಲ್ಲಿ ಹಚ್ಚುವೆ  ಬೆಂಕಿ ಕಿಚ್ಚು  ಜನರಲ್ಲಿ ಜನ ಕೂಗಿ ಕೇಳಿದರು ಸಹಾಯ ನನಲ್ಲಿ ನಾ ನಿದ್ದೆಯ ಗುಂಗಲ್ಲಿ, ಕುಳಿತೆ ನನ್ನ ಖುರ್ಚಿಯಲ್ಲಿ   ನಾಬಂದೆ ಜನರ ನಡುವಲ್ಲಿ ಜನ ಮುಗಿಬಿದ್ದರು ಸಹಾಯ ಬೇಡುತಲಿ ಜನರನ್ನು  ಆಲಿಸದೆ ನಾ ಕುಳಿತೆ ನನ್ನ ಐಷಾರಾಮಿ ಕಾರಲ್ಲಿ ಜನ ಉಗಿದರು  ಮನದಲ್ಲಿ, ನಾ  ಖುರ್ಚಿ ಹಿಡಿದೆ ಭದ್ರವಾಗಿ ನನ್ನ ಕೈಯಲ್ಲಿ ಜನ  ಕುಗ್ಗಿ  ಕೂಗಿದರು ನೀ ನಮ್ಮ ಸೇವಕ  ನನ್ನ ನಗುಮುಖದ  ಉತ್ತರ ನಾ ಕೊಟ್ಟ  ನೋಟಿಗೆ , ನೀ ಕೊಟ್ಟ ವೋಟು ನಾ ನಿಲ್ಲಿ ಖುರ್ಚಿಯ ಮಾಲೀಕ ಜನರಿಲ್ಲಿ ಮೂಕ  ಪ್ರೇಕ್ಷಕ.

ಮಳೆ

ಕಾರ್ಮೋಡ  ಕವಿದಿತ್ತು ಜಗವೆಲ್ಲಾ ಆಕಾಶ ನೋಡಿದರು ಜನರೆಲ್ಲಾ ಸಂಗೀತ ಮೊಳಗಿತ್ತು  ಜಗವೆಲ್ಲಾ ಮಳೆ ನಿನ್ನ ದಾರಿ ಕಾದೆವು ನಾವೆಲ್ಲ ಮಳೆ  ನೀ ಬರಲು........  ಸೂರ್ಯ ಮರೆಯಾದ ಈಗ ಭೂಮಿ  ಬಾಯಿತೆರೆಯಿತೀಗ  ಮುದುಡಿದ  ತಾವರೆ ಅರಳಿತೀಗ ನಮ್ಮ ದಾಹ ತೀರಿತೀಗ ಮಳೆ  ನೀ ಬರಲು........ ಹಕ್ಕಿ ಹಾಡ್ಯವ  ಬಾನಗ ಹಸಿರು ಚೀಗ್ರ್ಯಾವ ವನದಾಗ ಜಾನುವಾರು  ಕುಣಿದಾವ ಕೊಟ್ಟಿಗ್ಯಾಗ ಹರುಷವಾಗ್ಯಾದ  ಮನದಾಗ  ಮಳೆ  ನೀ ಬರಲು........ ರೈತ  ಬಿತ್ತ್ಯಾನಾ  ಹೊಲ್ದಾಗ ಮಕ್ಕಳು ಆಡ್ಯಾವ ನೀರಾಗ ಕಪ್ಪಿ  ವದ್ರ್ಯಾವ  ಬಾವ್ಯಾಗ ಹೊಸ ಉತ್ಸಾಹ ಬಂದಾದ ಬಾಳಾಗ