ರೈತ

ನೀನಾದೆ ಅನ್ನಧಾತ ನಮಗಿಲ್ಲಿ
ನಿನ್ನ ಕೈ ಕೆಸರಾದರೆ ನಮ್ಮ ಬಾಯಿ ಮೊಸರಿಲ್ಲಿ
ಭೂ ತಾಯಿಯನ್ನು ನಂಬಿ ಬಿತ್ತುವೆ ನೀನಲ್ಲಿ 
ಜಗವೆಲ್ಲ ನಿನ್ನ ನಂಬಿ ಹಸಿದು ಕುಂತಿರುವುದು ಇಲ್ಲಿ 

ಜನರೆಲ್ಲಾ ಲಕ್ಷ್ಮಿ ಸೇವಕರು ಜಗದಲ್ಲಿ 
ನೀನೊಬ್ಬ ಭೂ ತಾಯಿ ಸೇವಕ ಅದರಲ್ಲಿ 
ಕೊಟ್ಟ ಹಣಕೆ ತಿಂದು ಚೆಲ್ಲಿದರು ಜನರಿಲ್ಲಿ 
ನೀ ಪಟ್ಟ ಕಷ್ಟ ನೆನೆಯುವರಾರು ಇಲ್ಲಿ 

ಉಳುವ ನೇಗಿಲ ಯೋಗಿಯು ನೀನಲ್ಲಿ
ನಿನ್ನ ಜೀವನ ಭೂ ತಾಯಿ ಮಡಿಲ್ಲಲಿ 
ನಮ್ಮ ತುತ್ತು ಅನ್ನದ ಒಡೆಯನು ನೀನಿಲ್ಲಿ 
ಜಗವನು ಸಾಕುವ ಸಾಹುಕಾರ ನೀನಿಲ್ಲಿ 

ನೀ ಬೆಳೆದ ಬೇಳೆಗೆ ಸರಿಯಾದ ಬೆಲೆ ಇಲ್ಲಾ ಇಲ್ಲಿ 
ನೀ ಮಾಡಿದ್ದಾ ಸಾಲಕೆ ಬಡ್ಡಿ ಉಂಟು ಇಲ್ಲಿ 
ಸಾಲದ ಬಾದೆಗೆ ನೊಂದು ಕುಗ್ಗಿದೆ ನೀನಿಲ್ಲಿ 
ಸಾವಿನ ಬಾಗಿಲು ತಟ್ಟಿದೆ ನೀ ಮನದಲ್ಲಿ . 



Comments

Popular posts from this blog

ರಾಜಕಾರಣಿ

ಮಳೆ

KPCRS ನಲ್ಲಿ ನಾವು