ಮಳೆ

ಕಾರ್ಮೋಡ  ಕವಿದಿತ್ತು ಜಗವೆಲ್ಲಾ
ಆಕಾಶ ನೋಡಿದರು ಜನರೆಲ್ಲಾ
ಸಂಗೀತ ಮೊಳಗಿತ್ತು  ಜಗವೆಲ್ಲಾ
ಮಳೆ ನಿನ್ನ ದಾರಿ ಕಾದೆವು ನಾವೆಲ್ಲ

ಮಳೆ  ನೀ ಬರಲು........ 
ಸೂರ್ಯ ಮರೆಯಾದ ಈಗ
ಭೂಮಿ  ಬಾಯಿತೆರೆಯಿತೀಗ 
ಮುದುಡಿದ  ತಾವರೆ ಅರಳಿತೀಗ
ನಮ್ಮ ದಾಹ ತೀರಿತೀಗ

ಮಳೆ  ನೀ ಬರಲು........
ಹಕ್ಕಿ ಹಾಡ್ಯವ  ಬಾನಗ
ಹಸಿರು ಚೀಗ್ರ್ಯಾವ ವನದಾಗ
ಜಾನುವಾರು  ಕುಣಿದಾವ ಕೊಟ್ಟಿಗ್ಯಾಗ
ಹರುಷವಾಗ್ಯಾದ  ಮನದಾಗ

 ಮಳೆ  ನೀ ಬರಲು........
ರೈತ  ಬಿತ್ತ್ಯಾನಾ  ಹೊಲ್ದಾಗ
ಮಕ್ಕಳು ಆಡ್ಯಾವ ನೀರಾಗ
ಕಪ್ಪಿ  ವದ್ರ್ಯಾವ  ಬಾವ್ಯಾಗ
ಹೊಸ ಉತ್ಸಾಹ ಬಂದಾದ ಬಾಳಾಗ


  

Comments

Post a Comment

Popular posts from this blog

ರಾಜಕಾರಣಿ

KPCRS ನಲ್ಲಿ ನಾವು